My Slide

Saturday, August 28, 2021

ಒಂದೆಲಗ


ಒಂದೆಲಗ 


ಒಂದು ಬೇರಿಗೆ ಒಂದೇ ಎಲೆ ಇರುವುದರಿಂದ ಈ ಸಸ್ಯವನ್ನು ಒಂದೆಲಗ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಎಲ್ಲಾ ಸೊಪ್ಪುಗಳಲ್ಲಿ ಪೋಷಕಾಂಶಗಳಿವೆ. ಆದರೆ ಕೆಲವು ಸಸ್ಯಗಳಲ್ಲಿ ಅಮೂಲ್ಯ ಅದ್ಭುತವಾದ ಔಷದೀಯ ಗುಣಗಳಿವೆ. ಅಂತಹ ಸಸ್ಯಗಳಲ್ಲಿ ಈ ಒಂದೆಲಗ ಒಂದು.

ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.

ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು ಕಂಡುಕೊಳ್ಳಲಾಗಿದೆ. ಇಂದಿನ ಕೊರೊನಾ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಕೂಡಿ ಹಾಕಲ್ಪಟ್ಟ ಪರಿಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಮಾನಸಿಕ ಒತ್ತಡವು ಅತಿಯಾಗುತ್ತಿದೆ.

ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ.

ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣ ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಂಡು ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು. ಬ್ರಾಹ್ಮಿ ತಿಂದರೆ ಅದರಿಂದ ಸಿಗುವ ಐದು ಮಾನಸಿಕ ಲಾಭಗಳ ಬಗ್ಗೆ ತಿಳಿಯಿರಿ.



ಚಿಕಿತ್ಸೆ

ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದನ್ನು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.

  • ಉತ್ತಮ ಆರೋಗ್ಯದೊಂದಿಗೆ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ.
  • ಉತ್ತಮ ಆರೋಗ್ಯದೊಂದಿಗೆ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ. ಸಸ್ಯಶಾಸ್ತ್ರದ ಪ್ರಕಾರ ಬಕೊಪ ಮೊನಿಯೆರಿ (ನೀರು ಬ್ರಾಹ್ಮಿ) ಮತ್ತು ಸೆಂಟೆಲ್ಲಾ ಏಷಿಯಾಟಿಕಾ (ಮಂಡೂಕಪರ್ಣಿ/ ಒಂದೆಲಗ) ಎಂಬ ಎರಡು ಪ್ರಬೇಧಗಳನ್ನು ‘ಬ್ರಾಹ್ಮಿ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.ಬ್ರಾಹ್ಮಿ ಎಂಬ ದಿವ್ಯೌಷಧದ ಉಲ್ಲೇಖ ವೇದಗಳಲ್ಲಿಯೂ ಕಾಣಸಿಗುತ್ತದೆ. ಆಯುರ್ವೇದದಲ್ಲಿ 2000ಕ್ಕೂ ಹೆಚ್ಚು ವರ್ಷಗಳಿಗೆ ಮುನ್ನವೇ ಬ್ರಾಹ್ಮಿಯನ್ನು ಔಷಧವಾಗಿ ಬಳಸುತ್ತಿದ್ದರು. ಹಿಂದಿನ ಋಷಿಮುನಿಗಳು ಬ್ರಾಹ್ಮಿಯ ಚಿಕಿತ್ಸಾ ಉಪಯುಕ್ತತೆಯನ್ನು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ ಬ್ರಾಹ್ಮಿ ಮೇಧ್ಯ (ಬುದ್ಧಿಮತ್ತೆ ಹೆಚ್ಚಿಸುವ ಗುಣ), ಸ್ಮೃತಿಪ್ರದ (ನೆನಪಿನ ಶಕ್ತಿವರ್ಧಕ), ಆಯುಷ್ಯ (ಆಯುಸ್ಸು ವರ್ಧಿಸುವ), ರಸಾಯನ (ಪುನರುಜ್ಜೀವನ ಸಾಮರ್ಥ್ಯವಿರುವ), ಪ್ರಜ್ಞಾ ವರ್ಧನ (ಬೌದ್ಧಿಕ ಸಾಮರ್ಥ್ಯ), ಬಲ್ಯ (ಬಲಪ್ರದ, ವಿಶೇಷವಾಗಿ ಮೆದುಳಿನ ಶಕ್ತಿಯನ್ನು ವರ್ಧಿಸುವ), ಜೀವನಿಯ (ಜೀವಸಾಮರ್ಥ್ಯ ತುಂಬುವ), ಸ್ವರ ವರ್ಣಪ್ರದ (ಸ್ವರ ಮತ್ತು ದೇಹಕಾಂತಿ ವೃದ್ಧಿಸುವ) ಗುಣಗಳನ್ನು ಹೊಂದಿರುವ ದಿವ್ಯೌಷಧ.
ವಯೋವೃದ್ಧರ ಬುದ್ಧಿಮಾದ್ಯಂತೆ
  • ಬಹುತೇಕ ಮಂದಿ ಮೆದುಳಿನ ವಿಶೀರ್ಣ (ನ್ಯುರೋಡೀಜನರೇಷನ್) ಮತ್ತು ವಯೋವೃದ್ಧರ ಬುದ್ಧಿಮಾದ್ಯಂತೆ (ಡಿಮೇನ್ಷಿಯ) ಸಮಸ್ಯೆ ಪೀಡಿತರಾಗಿರುತ್ತಾರೆ. ವೃದ್ಧಾಪ್ಯದ ಈ ಕಾಯಿಲೆಗಳು (ನ್ಯೂರೋ ಡೀಜನರೇಟಿವ್ ಡಿಸೀಸಸ್, ಪಾರ್ಕಿನ್ಸನ್, ಡಿಮೇನ್ಷಿಯ, ಅಲ್ಜೈಮರ್) ಆರ್ಥಿಕ ವ್ಯವಸ್ಥೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದ್ದು, ವರ್ಷಕ್ಕೆ ಸುಮಾರು 604 ಶತಕೋಟಿ ಡಾಲರ್ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಆತಂಕದ ವಿಷಯವೆಂದರೆ ಪ್ರತಿ ನಾಲ್ಕು ಸೆಕಂಡಿಗೆ ಡಿಮೇನ್ಷಿಯದ ಒಬ್ಬ ಹೊಸ ರೊಗಿ ಪತ್ತೆಯಾಗುತ್ತಿದ್ದಾನೆ.
  • ಕೇವಲ ಸಾಂಪ್ರದಾಯಿಕ ವೈದ್ಯರು ಮಾತ್ರವಲ್ಲದೇ ಆಧುನಿಕ ನರರೋಗ ತಜ್ಞರೂ ಬ್ರಾಹ್ಮಿಯ ಮಹತ್ವವನ್ನು ಗುರುತಿಸಿದ್ದಾರೆ. ಕುಗ್ಗಿದ ನರತಂತುಗಳ ವಿಸ್ತರಣೆಗೆ ಬ್ರಾಹ್ಮಿ ಸಹಕಾರಿ ಎಂಬುದನ್ನು ಪ್ರಯೋಗಗಳು ರುಜುವಾತು ಮಾಡಿವೆ. ಬ್ರಾಹ್ಮಿ ಅನೇಕ ನರರೋಗಗಳಲ್ಲಿ ಅಂದರೆ ಮೂರ್ಛೆ (ಎಪಿಲೆಪ್ಸಿ), ಪಾರ್ಕಿನ್ಸನ್ ಮತ್ತು ಅಲ್ಜೈಮರ್‌ನಂಥ ನರಸಂಬಂಧಿ ಕಾಯಿಲೆಗಳಲ್ಲಿ ಉಪಯುಕ್ತಕಾರಿ ಎಂಬುದನ್ನು ಒಪ್ಪಿದ್ದಾರೆ. ನೀರು ಬ್ರಾಹ್ಮಿ ನರಕೋಶಗಳನ್ನು ಉತ್ತೇಜಿಸಿ ದೀರ್ಘ ಸ್ಮರಣ ಶಕ್ತಿಗೆ ನೆರವಾಗುತ್ತದೆ. ಆರಂಭದಲ್ಲಿಯೇ ನರಕೋಶಗಳ ಸಮಸ್ಯೆಗಳನ್ನು ಪತ್ತೆ ಹಚ್ಚಿದರೆ ಡಿಮೇನ್ಷಿಯ ಮತ್ತು ಅಲ್ಜೈಮರ್ ಕಾಯಿಲೆಗಳನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಆಯುರ್ವೇದ ನಮ್ಮ ದೈನಂದಿನ ಆಹಾರದಲ್ಲಿಯೇ ಬ್ರಾಹ್ಮಿಯ ಬಳಕೆಯನ್ನು ಶಿಫಾರಸು ಮಾಡುತ್ತದೆ.
  • ಆಯುರ್ವೇದದಲ್ಲಿ ಒಂದೆಲಗವನ್ನು(ಬ್ರಾಹ್ಮಿ)ಮಕ್ಕಳು ಮತ್ತು ವೃದ್ಧರು ಹೀಗೆ ಎರಡೂ ವರ್ಗದವರ ಚಿಕಿತ್ಸೆಗೆ ಬಳಸುತ್ತಾರೆ. ಮಕ್ಕಳಲ್ಲಿ ಸ್ಮರಣಶಕ್ತಿಯ ವೃದ್ಧಿ ಮತ್ತು ಮಗುವಿನ ನರತಂತು ದೋಷಗಳ ನಿವಾರಣೆಗೆ ಬ್ರಾಹ್ಮಿಯನ್ನು ಬಳಸುತ್ತಾರೆ. ಹಿರಿಯರಲ್ಲಿ ನರ ಮತ್ತು ಮೆದುಳಿನ ವಿಶೀರ್ಣ ರೋಗಗಳಾದ ಡೀಮೆನ್ಷಿಯ, ಪಾರ್ಕಿನ್ಸನ್ಸ್, ಅಲ್ಜೈಮರ್ ಇತ್ಯಾದಿ ಕಾಯಿಲೆಗಳಿಗೆ ಬ್ರಾಹ್ಮಿಯನ್ನು ಉಪಯೋಗಿಸುತ್ತಾರೆ. ವೈದ್ಯರು ಬ್ರಾಹ್ಮಿಯನ್ನು ಹಲವಾರು ರೂಪದಲ್ಲಿ ಬಳಸುತ್ತಾರೆ: ಬ್ರಾಹ್ಮಿ ಸ್ವರದ, ಬ್ರಾಹ್ಮಿ ಚೂರ್ಣ, ಬ್ರಾಹ್ಮಿ ವಟಿ, ಬ್ರಾಹ್ಮಿ ಘೃತ ಇತ್ಯಾದಿ. ದಿನನಿತ್ಯದ ಆಹಾರದಲ್ಲಿ ಬ್ರಾಹ್ಮಿಯನ್ನು ಹಲವು ಬಗೆಯ ತಿನಿಸುಗಳ ರೂಪದಲ್ಲಿ ಬಳಸಬಹುದು
  • ಒಂದೆಲಗ ಅಥವಾ ಬ್ರಾಹ್ಮಿ ಎಲೆಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತೇವೆ. ಗದ್ದೆಯ ಬದುವಿನಲ್ಲಿ ಹೆಚ್ಚಾಗಿ ಸಿಗುವ ಈ ಬ್ರಾಹ್ಮಿ ಎಲೆಯೂ ಔಷಧೀಯ ಗುಣವನ್ನು ಹೊಂದಿದ್ದು ಆರ್ಯುವೇದದಲ್ಲಿ ಹೆಚ್ಚು ಬಳಕೆಯಾಗುವ ಎಲೆ ಇದಾಗಿದ್ದು, ಸರ್ವರೋಗಗಳಿಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೌದು ಹಾಗಾದರೆ ಇದರಲ್ಲಿರುವ ಔಷಧೀಯ ಗುಣಗಳ ಕುರಿತು ನೀವು ತಿಳಿದುಕೊಳ್ಳುವುದು ಒಳ್ಳೆಯದು.

    ಅಂತಹ ಒಂದು ಅಪರೂಪದ ಆಯುರ್ವೇದೀಯ ಗುಣಗಳುಳ್ಳ ಅಮೋಘವಾದ ಮೂಲಿಕೆಯ ಉಪಯೋಗಗಳನ್ನು ತಿಳಿದುಕೊಳ್ಳೋಣ :

    • ಗರ್ಭಿಣಿಯರು ಬ್ರಾಹ್ಮಿ ಎಲೆಯ ರಸವನ್ನು ಕುಡಿಯುವುದರಿಂದ ತಮ್ಮ ಆರೋಗ್ಯ ಜೊತೆಗೆ ಹುಟ್ಟುವ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ.

    • ಹೃದ್ರೋಗದಿಂದ ಬಳಲುವವರು ಬ್ರಾಹ್ಮಿ ಅಥವಾ ಒಂದೆಲಗದ ರಸವನ್ನು ದಿನ ನತ್ಯ ಸೇವನೆ ಮಾಡುವುದರಿಂದ ಇದು ಟಾನಿಕ್‍ನಂತೆ ಕೆಲಸ ಮಾಡುತ್ತದೆ.

    • ಮಕ್ಕಳಿಗೆ ಜ್ಞಾಪಕಶಕ್ತಿ ಹೆಚ್ಚಾಗಲು ಪ್ರತಿ ದಿನ ಬೆಳಗ್ಗೆ ನಾಲ್ಕರಿಂದ ಐದು ಎಲೆಗಳನ್ನು ಕಲ್ಲು ಸಕ್ಕರೆಯೊಂದಿಗೆ ಸೇವಿಸುವುದು ಒಳ್ಳೆಯದು.

    • ಸಂಧಿವಾತದಿಂದ ಬಳಲುತ್ತಿರುವವರು ಎಳ್ಳೆಣ್ಣೆಗೆ ಬ್ರಾಹ್ಮಿ ಎಲೆಯ ರಸವನ್ನು ಬೆರೆಸಿ ಬಿಸಿಮಾಡಿ ಹಚ್ಚುವುದರಿಂದ ಸಂಧಿವಾತದಂತಹ ಸಮಸ್ಯೆಗಳು  ನಿವಾರಣೆಯಾಗುತ್ತದೆ.

  • ದೀರ್ಘಕಾಲದಿಂದ ತಲೆನೋವಿನಿಂದ ಬಳಲುತ್ತಿದ್ದರೆ ಬ್ರಾಹ್ಮಿ ತೈಲವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚುತ್ತಿದ್ದರೆ ತಲೆನೋವು ಶಮನವಾಗುತ್ತದೆ.

    • ಬ್ರಾಹ್ಮಿ ಎಲೆಗಳು ನರಗಳಿಗೆ ದಿವ್ಯ ಔಷಧ. ಒಂದೆಲಗ ಎಲೆಯ ತಂಬುಳಿಯನ್ನು ಮಾಡಿಕೊಂಡು ತಿನ್ನುತ್ತಿದ್ದರೆ ನರಗಳಿಗೆ ಪರಿಣಾಮಕಾರಿ.

    • ಕೆಮ್ಮು ಉಸಿರಾಟದ ತೊಂದರೆ ಇರುವವರು ಈ ಬ್ರಾಹ್ಮಿ ಅಥವಾ ಒಂದೆಲಗ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಉತ್ತಮ.

    • ಮಲಬದ್ಧತೆ ಸಮಸ್ಯೆಯಿರುವವರು ಈ ಒಂದೆಲಗ ಎಲೆಯಿಂದ ರಸವನ್ನು ಸೇವಿಸುವುದರಿಂದ ನಿವಾರಣೆಯಾಗುತ್ತದೆ.

    • ತಲೆ ಕೂದಲಿನ ಬುಡವನ್ನು ದೃಢಗೊಳಿಸಲು ಒಂದೆಲಗ ಎಲೆಯಿಂದ ತಯಾರಿಸಿ ತೈಲವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

    • ಮೆದುಳಿಗೆ ಸಂಬಂಧಿಸಿದ ಸಮಸ್ಯೆಯನ್ನು ದೂರವಾಗಿಸಲು ಈ ಒಂದೆಲಗವನ್ನು ಸೇವಿಸುವುದು ಉತ್ತಮ.

    • ಒಂದೆಲಗ ಎಲೆಯನ್ನು ಒಣಗಿಸಿ ಪುಡಿ ಮಾಡಿ, ದಿನನಿತ್ಯ ಸೇವಿಸಿದರೆ ಸಕ್ಕರೆ ಖಾಯಿಲೆ ಇರುವವರ ಆರೋಗ್ಯಕ್ಕೆ ಒಳ್ಳೆಯದು.

    • ನಿದ್ರಾಹೀನತೆಯಿಂದ ಬಳಲುವವರು ಈ ಒಂದೆಲಗ ಸೊಪ್ಪನ್ನು ಅಥವಾ ಸೊಪ್ಪಿನಿಂದ ತಯಾರಿಸಿದ ಅಡುಗೆಯನ್ನು ಸೇವಿಸಿದರೆ ನಿದ್ರೆಗೆ ಸಂಬಂಧಿಸಿದ    ತೊಂದರೆಗಳು ನಿವಾರಣೆಯಾಗುತ್ತದೆ.

    • ಒಂದೆಲಗದ ಎಲೆ, ಹಿಪ್ಪಲಿಗೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ದಿನಕ್ಕೆರಡು ಬಾರಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆಯೂ     ಶಮನವಾಗುತ್ತದೆ.  

    • ಆತಂಕ, ಒತ್ತಡ (ANXITY) ಹಾಗೂ ತಲೆನೋವಿನಂತಹ ಸಮಸ್ಯೆಗಳಿಗೆ ಈ ಒಂದೆಲಗ ಕಷಾಯವನ್ನು ಸೇವಿಸಿದರೆ ನಿವಾರಣೆಯಾಗುತ್ತದೆ.

    • ದಿನನಿತ್ಯ ಈ ಎಲೆಯನ್ನು ತಿನ್ನುವುದರಿಂದ ಬುದ್ಧಿ ಚುರುಕಾಗುತ್ತದೆ.

    • ಉರಿಮೂತ್ರ ಸಮಸ್ಯೆ ಇರುವವರು ಈ ಸೊಪ್ಪನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ತುಂಬಾನೇ ಪರಿಣಾಮಕಾರಿ.

    • ಒಣಗಿಸಿ ಪುಡಿ ಮಾಡಿದ ಒಂದೆಲಗ ಹಾಗೂ ಜೀರಿಗೆ ಪುಡಿಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಬಾಣಂತಿಯರಲ್ಲಿ ಎದೆಹಾಲು ಉತ್ಪತ್ತಿಯಾಗುತ್ತದೆ.

  • ದೀರ್ಘಕಾಲದಿಂದ ತಲೆನೋವಿನಿಂದ ಬಳಲುತ್ತಿದ್ದರೆ ಬ್ರಾಹ್ಮಿ ತೈಲವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚುತ್ತಿದ್ದರೆ ತಲೆನೋವು ಶಮನವಾಗುತ್ತದೆ.

  • ಉಲ್ಲೇಖಗಳು

    1.  "Pharmacological Review on Centella asiatica: A Potential Herbal Cure-all". Indian J Pharm Sci: 546–56. September 2010.
    2.  ಬ್ರಾಹ್ಮಿ... ಮರೆವಿಗೆ ವರಡಾ.ಆರ್.ಪ್ರಶಾಂತ್:09/07/2016[[೧]]
    ಪ್ರಸ್ತುತಿ: ಶ್ರೀ ರವೀಂದ್ರ ಕುಮಾರ್